ಭಾರತದ ಮೊದಲ Touch Screen Washing Machine 2026 – Haier F11 Full Details, Price & Features
ಸದ್ಯ ಎಲ್ಲರ ಮನೆಯಲ್ಲೂ ವಾಷಿಂಗ್ ಮಷೀನ್ ಇದ್ದೇ ಇರುತ್ತೆ. ಎಲ್ಲರಿಗೂ ಅವರವರ ಕೆಲಸ ಮಾಡೋಕೆ ಕಷ್ಟ ಆಗುತ್ತೆ, ಹಾಗೆ ಕಂಪನಿ ಕೆಲಸ ಮಾಡಿ ಬಂದು ಬಟ್ಟೆ ಒಗೆಯೋಕೆ ಕಷ್ಟ ಆಗತ್ತೆ. ಹಾಗಾಗಿ ಎಲ್ಲರೂ ವಾಷಿಂಗ್ ಮಷೀನ್ ಖರೀದಿಸಲು ಹೋಗುತ್ತಾರೆ. ಸದ್ಯ ಹೆಚ್ಚಿನ ಮನೆಗಳಲ್ಲಿ ವಾಷಿಂಗ್ ಮಷೀನ್ ಇದೆ, ಆದರೆ ಕೆಲವರ ವಾಷಿಂಗ್ ಮಷೀನ್ ಹಳೆಯದಾಗಿದೆ; ಅದೇ ಬಟನ್ ಹಾಗೆ ನೋಬ್‌ಗಳು ಇರುತ್ತದೆ. ಮೊದಲು ಕೀಪ್ಯಾಡ್ ಮೊಬೈಲ್‌ನಿಂದ ಹೇಗೆ ಸ್ಮಾರ್ಟ್‌ಫೋನ್‌ಗೆ ಬದಲಾದೆವೋ, ಡೂಮ್ ಟಿವಿಯಿಂದ ಹೇಗೆ ಸ್ಮಾರ್ಟ್ LED ಟಿವಿಗೆ ಬದಲಾದೆವೋ, ಹಾಗೆ ವಾಷಿಂಗ್ ಮಷೀನ್‌ನಲ್ಲೂ ಬದಲಾಗಬೇಕಿದೆ.
ಹೈಯರ್ (Haier) ಕಂಪನಿಯ ಹೊಸ ಕ್ರಾಂತಿ ಅದಕ್ಕಾಗಿ ಹೈಯರ್ ಕಂಪನಿಯು ಭಾರತದ ಮೊದಲ ಕಲರ್‌ಫುಲ್ ಹಾಗೆ ಟಚ್ ಪ್ಯಾನೆಲ್ ಹೊಂದಿರುವ ವಾಷಿಂಗ್ ಮಷೀನ್ ಅನ್ನು ತಂದಿದ್ದಾರೆ. ಅದು ಎಷ್ಟು ಅದ್ಭುತ ವಿಶೇಷತೆಯನ್ನು ಹೊಂದಿದೆ ಅಂದರೆ, ನೀವು ಯಾವುದೇ ಬಟನ್ ಅಥವಾ ನೋಬ್ ಅನ್ನು ತಿರುಗಿಸಬೇಕಿಲ್ಲ; ಕೇವಲ ಸ್ಮಾರ್ಟ್‌ಫೋನ್ ರೀತಿ ಟಚ್ ಮಾಡಿದರೆ ಸಾಕು.
ಹೌದು, ಹೈಯರ್ ಕಂಪನಿಯ ಹೊಸದಾದ F11 ಮಾದರಿಯ ವಾಷಿಂಗ್ ಮಷೀನ್ ಮಾರುಕಟ್ಟೆಯಲ್ಲಿ ಹೊಸದಾಗಿ ಛಾಪು ಮೂಡಿಸಿದೆ. 12KG ಕೆಪ್ಯಾಸಿಟಿ ಇರುವ ಈ ವಾಷಿಂಗ್ ಮಷೀನ್‌ನಲ್ಲಿ ಸಂಪೂರ್ಣ ಕಲರ್‌ಫುಲ್ ಆಗಿರುವ ಬಣ್ಣದ ಸ್ಕ್ರೀನ್ ಇರುತ್ತದೆ. ನೀವು ಯಾವುದಾದರೂ ವಾಶ್ ಅನ್ನು ಮಾಡಬೇಕೆಂದರೆ ಅದರ ಚಿತ್ರವೂ ಮೂಡುತ್ತದೆ. ಅಂದರೆ ನೀವು ಒಂದು ವೇಳೆ ಕಾಟನ್ ಬಟ್ಟೆಯನ್ನು ವಾಶ್ ಮಾಡಬೇಕೆಂದರೆ, ನೀವು ಸುಲಭವಾಗಿ ಸ್ಕ್ರೀನ್ ಅಲ್ಲಿ ಕಾಣುವ ಕಾಟನ್ ಬಟ್ಟೆಯ ಚಿತ್ರದ ಮೇಲೆ ಒತ್ತಿದರೆ ಸಾಕಾಗುತ್ತದೆ. ಅದು ಕಾಟನ್ ಬಟ್ಟೆಗೆ ಬೇಕಾಗುವ ನೀರು ಹಾಗೆ ಬೇಕಾಗುವ ಬಿಸಿನೀರನ್ನು ತಾನೇ ತೆಗೆದುಕೊಳ್ಳುತ್ತದೆ.
Ultra Fresh ವಿಶೇಷತೆ ಜೊತೆಗೆ ಇದರಲ್ಲಿ 'ULTRA Fresh' ಅನ್ನುವ ವಿಶೇಷತೆ ಇದ್ದು, ಇದು ನೀವು ಬಟ್ಟೆಯನ್ನು ತೊಳೆದ ನಂತರ 12 ಗಂಟೆಗಳವರೆಗೆ ಬಟ್ಟೆಯನ್ನು ವಾಷಿಂಗ್ ಮಷೀನ್‌ನಲ್ಲಿ ಇಡಲು ಅವಕಾಶ ನೀಡುತ್ತದೆ. ಯಾಕೆಂದರೆ ಈ ವಾಷಿಂಗ್ ಮಷೀನ್‌ನಲ್ಲಿರುವ Ultra Fresh ವಿಶೇಷತೆಯು ಪ್ರತಿ 1 ತಾಸಿಗೆ 2 ನಿಮಿಷಗಳ ಕಾಲ ಒಳಗಡೆ ಇರುವ ಕೆಟ್ಟ ಗಾಳಿಯನ್ನು ಹೊರಗೆ ಹಾಕಿ, ಒಳ್ಳೆಯ ಫ್ರೆಶ್ ಗಾಳಿಯನ್ನು ಒಳಗೆ ತರುತ್ತದೆ.
ವಾಷರ್ ಮತ್ತು ಡ್ರೈಯರ್ (Washer & Dryer) ಇದರಲ್ಲಿ 2 ಮಾದರಿಗಳು ಇದ್ದು, ಒಂದು ಕೇವಲ ವಾಷರ್ ಆಗಿದ್ದರೆ ಇನ್ನೊಂದು ವಾಷರ್ ಡ್ರೈಯರ್‌ಗಳಲ್ಲಿ ಲಭ್ಯವಿದೆ. ವಾಷರ್ ಡ್ರೈಯರ್ ಅನ್ನು ನೀವು ಖರೀದಿಸಿದರೆ ನಿಮಗೆ 12/7 ಅಂದರೆ 12 ಕೆಜಿ ವಾಶರ್ ಆಗಿದ್ದರೆ ಕೇವಲ 7 ಕೆಜಿ ಬಟ್ಟೆಯನ್ನು ನೀವು ಸಂಪೂರ್ಣವಾಗಿ ಡ್ರೈ ಅಂದರೆ ಒಣಗಿಸಬಹುದು. ಅಂದರೆ ನೀವು ವಾಶ್ ಮಾಡಿರುವ ಬಟ್ಟೆಯು ಸಂಪೂರ್ಣ ಒಣಗಿ ನಿಮಗೆ ಸಿಗುತ್ತದೆ ಹಾಗೆ ನೀವು ಅದನ್ನು ಹೊರಗಿನ ತಾಪಮಾನಕ್ಕೆ ಹಾಕದೆಯೇ ಧರಿಸಿಕೊಳ್ಳಬಹುದಾಗಿದೆ.

ಸದ್ಯ ಮಾರುಕಟ್ಟೆಯಲ್ಲೇ ಹಲವು ಬಗೆಯ ಹಾಗೆ ಹಲವು ಕಂಪನಿಯ ವಾಷಿಂಗ್ ಮಷೀನ್ ಗಳು ಲಭ್ಯವಿದ್ದು, ಹೈಯರ್‌ನ ಈ ವಾಷಿಂಗ್ ಮಷೀನ್ ಹೆಚ್ಚಾಗಿ ಮಾರಾಟವಾಗುತ್ತಿದೆ. ಯಾಕೆಂದರೆ ಕಡಿಮೆ ಬೆಲೆಯಲ್ಲಿ ಒಳ್ಳೆಯ ವಿಶೇಷತೆಗಳು ಇದಾಗಿದ್ದು ಜನರಿಗೆ ಆಕರ್ಷಣೀಯವಾಗಿದೆ.
ವಾರಂಟಿ ಮತ್ತು ಬೆಲೆ ವಿವರ ಹೈಯರ್‌ನ ಈ ಎರಡೂ ಮಾದರಿಗಳಿಗೂ 4 ವರ್ಷಗಳ ಸಂಪೂರ್ಣ ವಾರಂಟಿ ಜೊತೆಗೆ 12 ವರ್ಷಗಳ ಮೋಟಾರ್ ವಾರಂಟಿ ಸೌಲಭ್ಯ ಲಭ್ಯವಿದ್ದು, ಯಾವುದೇ ಸಮಸ್ಯೆ ಇಲ್ಲದೆ 12 ವರ್ಷಗಳ ಕಾಲ ಬಳಸಬಹುದಾಗಿದೆ. ಹಾಗೆ ಹೈಯರ್ ಕಡೆಯಿಂದ ಅನೇಕ ಕ್ಯಾಶ್‌ಬ್ಯಾಕ್ ಹಾಗೂ ಫೈನಾನ್ಸ್ ಸ್ಕೀಮ್‌ಗಳನ್ನು ನೀಡುತ್ತಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಇದಕ್ಕೆ 52,000 ರೂ. (ವಾಷರ್) ಹಾಗೆ 62,000 ರೂ. (ವಾಷರ್ ಡ್ರೈಯರ್) ಬೆಲೆ ಲಭ್ಯವಿದೆ.
